    ಮೂಲದೊಡನೆ ಪರಿಶೀಲಿಸಿ

ಕಾಂಗೋ ಕೆಂಪು

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಬಟ್ಟೆಗಳಿಗೆ ಬಣ್ಣ ಹಾಕುವುದಕ್ಕೆ ಮತ್ತು ರಾಸಾಯನಿಕ ವಿಶ್ಲೇಷಣೆಯಲ್ಲಿ ಆಮ್ಲ-ಪ್ರತ್ಯಾಮ್ಲಸೂಚಕವಾಗಿ ಉಪಯೋಗಿಸುವ ಆರ್ಗೇನಿಕ್ ವಸ್ತು (ಕಾಂಗೋ ರೆಡ್). 1884ರಲ್ಲಿ ಪಿ. ಬಟೆಂಗೆರ್ ಈ ವರ್ಣವಸ್ತುವನ್ನು ಕಂಡು ಹಿಡಿದ. ಇದು ಆeóÉೂೀಬಣ್ಣಗಳ ಗುಂಪಿಗೆ ಸೇರಿದೆ. ಅಂದರೆ ಈ ಗುಂಪಿನ ಬಣ್ಣಗಳಲ್ಲಿ  ರ್ಯಾಡಿಕಲ್ಲು ಇರುತ್ತದೆ. ಹತ್ತಿ ಬಟ್ಟೆಗಳಿಗೆ ನೇರವಾಗಿ ಈ ಬಣ್ಣವನ್ನು ಲೇಪಿಸಬಹುದು. ವರ್ಣಬಂಧಕದ (ಮಾರ್ಡಂಟ್) ಸಹಾಯವಿಲ್ಲದೆ ಸುಲಭವಾಗಿ ಬಟ್ಟೆಗೆ ಈ ಬಣ್ಣ ಹಿಡಿಯುವುದರಿಂದ ಇದರ ಗುಂಪಿನ ಬಣ್ಣಗಳನ್ನು ನೇರ ಬಣ್ಣಗಳು (ಡೈರೆಕ್ಟ್ ಡೈಸ್) ಎಂದು ಕರೆಯುವರು. ಈ ಬಣ್ಣಗಳನ್ನೇ ಕೈಗಾರಿಕೆಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವರು. 

ಕಾಂಗೋ ಕೆಂಪು ಸೂಚಕವು ಆಮ್ಲದಲ್ಲಿ ನೀಲಿ ಬಣ್ಣವನ್ನೂ ಪ್ರತ್ಯಾಮ್ಲದಲ್ಲಿ ಕೆಂಪು ಬಣ್ಣವನ್ನೂ ಕೊಡುತ್ತದೆ.

 

 (ಎಂ.ಎ.ಎಸ್.ಆರ್.)